ಬೆಂಗಳೂರು-ನಾಗರಿಕರ ವಾರ್ಡ್ ಸಮಿತಿಗಳನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ಶಿಫಾರಸು ಮಾಡಿರುವ ಅಂಶಗಳನ್ನು ಎಲ್ಲ ರಾಜಕೀಯ ಪಕ್ಷಗಳು ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ’ಬೆಂಗಳೂರು ವಾರ್ಡ್ ಸಮಿತಿ ಬಳಗ’ ಆಗ್ರಹಿಸಿದೆ. ಭಾನುವಾರ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ವಾರ್ಡ್ ಸಮಿತಿ ಬಳಗದ ಎರಡನೇ ಸಮಾವೇಶದಲ್ಲಿ ೨೦೦ಕ್ಕೂ ಅಧಿಕ ನಾಗರಿಕರು ಹಾಗೂ ೬೭ ನೋಂದಾಯಿತ ನಾಗರಿಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಪಾಲ್ಗೊಂಡಿದ್ದವು. ಅವರೆಲ್ಲರು ತಮ್ಮ ವಾರ್ಡ್‌ನ ಸಮಸ್ಯೆ, ಬಲಪಡಿಸುವ […]

ಬೆಂಗಳೂರು- ಹಿಂದುಳಿದ ವರ್ಗಗಳ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವಾಗುವ ಉದ್ಧೇಶದೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಟ್ಯೂಷನ್ ಸೆಂಟರ್‌ಗಳನ್ನು ಆರಂಭಿಸಲು ಮುಂದಾಗಿದೆ. ಬೆಂಗಳೂರಿನ ಹತ್ತು ಕಡೆ ಈ ಬೋಧನ ಕೇಂದ್ರ(ಟ್ಯೂಷನ್ ಸೆಂಟರ್) ಗಳನ್ನು ಪ್ರಾರಂಭಿಸಲು ಬಿಬಿಎಂಪಿ ತಯಾರಿ ನಡೆಸಿದೆ. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 5 ರಿಂದ ನಗರದ ವಿವಿಧೆಡೆ ಹಿಂದುಳಿದ ವರ್ಗದ ಮಕ್ಕಳಿಗಾಗಿ ಟ್ಯೂಷನ್ ಸೆಂಟರ್ ಆರಂಭಿಸಲು ನಗರದ ನಾಗರಿಕರ ಸಂಸ್ಥೆ ಬಿಬಿಎಂಪಿ ಸಜ್ಜಾಗಿದೆ. “ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ” […]

ಬೆಂಗಳೂರು : ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಣಕ್ಕಾಗಿ ವೀಕೆಂಡ್ ಕರ್ಪ್ಯೂ ಹಾಗೂ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಈಗಾಗಲೇ ಕಳೆದ ವಾರದ ವೀಕೆಂಡ್ ಸಂದರ್ಭದಲ್ಲಿ ಮದ್ಯದಂಗಡಿಗಳನ್ನು ಸರ್ಕಾರ ಬಂದ್ ಮಾಡಿತ್ತು. ಈ ವಾರವೂ ಕೂಡ ಬಾರ್ ಬಂದ್ ಮಾಡಲಾಗುತ್ತದೆ. ಇಂದು ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆಯವರೆಗೆ ಬಾರ್ ಬಂದ್ ಆಗಿರಲಿವೆ ಎಂದು ಅಬಕಾರಿ ಸಚಿವರು ತಿಳಿಸಿದ್ದಾರೆ. ಈ ಮೂಲಕ ವಾರಾಂತ್ಯ ಕರ್ಪ್ಯೂ ಸಂದರ್ಭದಲ್ಲಿಯೂ ಎಣ್ಣೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದ್ದಾರೆ. […]

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಅಪಾರ್ಟ್‌ಮೆಂಟ್‌ಗಳಿಗೆ ಬಿಬಿಎಂಪಿ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್‌ಗಳಲ್ಲಿ ಜಿಮ್‌ಗಳು, ಈಜುಕೊಳಗಳು ಮತ್ತು ಇತರ ಕ್ರೀಡಾ ಸೌಲಭ್ಯಗಳನ್ನು ಮತ್ತೊಮ್ಮೆ ಬಂದ್ ಮಾಡಿಸಲಾಗುತ್ತಿದೆ. ಕಳೆದ 10 ದಿನಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಸೋಂಕು ಹೆಚ್ಚಳ ಹಿನ್ನೆಲೆ ಸಮುದಾಯ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಕಸರತ್ತು ನಡೆಸಿ ಹಲವು ಸಲಹೆಗಳನ್ನು ಪಾಲಿಸಲು ಮನವಿ […]

ವಾಷಿಂಗ್ಟನ್: ಭಾರತ ಕಂಪನಿ ಸೇರಿದಂತೆ ಏಳು ಖಾಸಗಿ ಪತ್ತೆದಾರಿ(ಸ್ಪೈ) ಸಂಸ್ಥೆಗಳನ್ನು ತನ್ನ ಪ್ಲಾಟ್‌ಫಾರಂನಿಂದ ಫೇಸ್‌ಬುಕ್ ಬ್ಯಾನ್ ಮಾಡಿದೆ. ಹ್ಯಾಕಿಂಗ್ ಹಾಗೂ ಇತರ ಸೈಬರ್ ಅಪರಾಧಗಳನ್ನು ಗುರುತಿಸಿದ ಫೇಸ್‌ಬುಕ್ ಅವುಗಳ ಹೆಸರನ್ನು ಬಹಿರಂಗ ಪಡಿಸಿದೆ. ಇದರಲ್ಲಿ ಒಂದು ಭಾರತೀಯ ಸಂಸ್ಥೆಯೂ ಸೇರಿರುವುದು ಆಘಾತಕಾರಿ ಸಂಗತಿಯಾಗಿದೆ. ಭಾರತೀಯ ಕಂಪನಿ ಬೆಲ್ಟ್ರೋಕ್ಸ್ ಸೇರಿದಂತೆ ಬ್ಲ್ಯಾಕ್ ಕ್ಯೂಬ್, ಬ್ಲೂಹಾಕ್ ಸಿಐ, ಸೈಟ್ರೋಕ್ಸ್ ಹೀಗೆ ಒಟ್ಟು ಏಳು ಸಂಸ್ಥೆಗಳ ಹೆಸರುಗಳನ್ನು ಬಹಿರಂಗ ಪಡಿಸಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ […]

Wordpress Social Share Plugin powered by Ultimatelysocial