ಕೇದಾರನಾಥ- ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಇಂದು ಉತ್ತರಾಖಂಡದ ಕೇದಾರನಾಥ ಬಳಿ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾರು ಚಟ್ಟಿ ಬಳಿ ಹೆಲಿಕಾಪ್ಟರ್ ಪತನವಾಗಿದ್ದು, ಇದುವರೆಗೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತಕಾಶಿಯಿಂದ ಹೆಲಿಕಾಪ್ಟರ್ ಟೇಕಾಫ್ ಆಗಿದ್ದು, ಅದರಲ್ಲಿ ಪೈಲಟ್ ಸೇರಿದಂತೆ ಒಟ್ಟು 6 ಮಂದಿ ಇದ್ದರು. ಯಾತ್ರಾರ್ಥಿಗಳೊಂದಿಗೆ ಹೆಲಿಕಾಪ್ಟರ್ ಮುಂದೆ ಸಾಗಿದಾಗ ಗರುಡಚಟ್ಟಿ ಬಳಿ […]

ನವದೆಹಲಿ-ಭಾರತದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಎಂ.ಎಂ. ನರವಣೆ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಸೇನಾ ಸಿಬ್ಬಂದಿಯ 29ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರ ಸ್ವೀಕರಿಸಿದರು. ಭಾರತದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರ ನಿಧನದ ಬಳಿಕ 2021ರ ಡಿಸೆಂಬರ್ ತಿಂಗಳಲ್ಲಿ ಭಾರತದ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ ಎಂ.ಎಂ. ನರವಣೆ ಅಧಿಕಾರ ವಹಿಸಿಕೊಂಡಿದ್ದರು. ನೂತನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಜೀವನ ಮತ್ತು ಸಾಧನೆ ಎಂ.ಎಂ. […]

ಪಣಜಿ : ಪಂಜಾಬ್ ಬೆನ್ನಲ್ಲೆ ಗೋವಾ ವಿಧಾನಸಭಾ ಚುನಾವಣೆಗೂ ಆಮ್ ಆದ್ಮಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿದ್ದು, ಖ್ಯಾತ ನ್ಯಾಯವಾದಿ ಅಮಿತ್ ಪಾಲೇಕರ್ ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಪ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಮಂಗಳವಾರ ಸಂಜೆ ಗೋವಾಕ್ಕೆ ಆಗಮಿಸಿದ್ದ ಕೇಜ್ರಿವಾಲಾ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಜತೆಗೆ ಚರ್ಚೆ ನಡೆಸಿದ್ದರು. ಎಲ್ಲ ಆಗುಹೋಗುಗಳ ಲೆಕ್ಕಾಚಾರದ […]

ದೇಶದಲ್ಲಿ ಪ್ರಾರಂಭವಾದ 15-18 ವರ್ಷದ ಮಕ್ಕಳ ಲಸಿಕೀಕರಣ ಯಶಸ್ವಿಯಾಗಿ ನಡೆಯುತ್ತಿದ್ದು, ಕೇವಲ 11 ದಿನಗಳಲ್ಲಿ 3.14 ಕೋಟಿಗೂ ಹೆಚ್ಚು ಮಕ್ಕಳು ಲಸಿಕೆ ಪಡೆದಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಸರ್ಕಾರ ಶೇ.80ರಿಂದ 85ರಷ್ಟು ಮಕ್ಕಳಿಗೆ ಅಂದ್ರೆ 7.40 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದೆ. ಈಗಿನ ವರದಿಯಂತೆ 3,14,84,269 ಮಕ್ಕಳು ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, […]

ನರ್ಕಾತಿಯಾಗಂಜ್‌ ಕ್ಷೇತ್ರದಿಂದ ಬಿಹಾರದ ಶಾಸಕಿಯಾಗಿ ಆಯ್ಕೆಯಾಗಿರುವ ಬಿಜೆಪಿಯ ರಶ್ಮಿ ವರ್ಮಾ ಅವರು ವಿಧಾನ ಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ, ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ ತಮ್ಮ ರಾಜೀನಾಮೆ ಪತ್ರವನ್ನು ರಶ್ಮಿ ಬಿಹಾರ ವಿಧಾನ ಸಭೆಯ ಸ್ಪೀಕರ್‌ ವಿಜಯ್ ಕುಮಾರ್‌ ಸಿನ್ಹಾರ ಕಚೇರಿಗೆ ಸಲ್ಲಿಸಿದ್ದಾರೆ. ರಶ್ಮಿರ ರಾಜೀನಾಮೆಗೆ ಇನ್ನೂ ಅಂಗೀಕಾರ ಬಿದ್ದಿಲ್ಲ. ಕಾರಣ ವಿಡ್-ಕೋ19 ನಿರ್ಬಂಧಗಳಿಂದಾಗಿ ವಿಧಾನ ಸಭೆ ಮುಚ್ಚಲ್ಪಟ್ಟಿದೆ. ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆ (ಯುಪಿಟಿಇಟಿ) […]

ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಕಿಶನ್‌ಗಢ ಫೈರಿಂಗ್ ರೇಂಜ್‌ನಲ್ಲಿ ಭಾನುವಾರ ನಡೆದ ಮೋರ್ಟರ್ ಸ್ಫೋಟದಲ್ಲಿ ಬಿಎಸ್‌ಎಫ್ ಯೋಧ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 136 ನೇ ಬೆಟಾಲಿಯನ್‌ನ ಬಿಎಸ್‌ಎಫ್ ಯೋಧರು ತರಬೇತಿಯಲ್ಲಿ ಭಾಗವಹಿಸಲು ಬಂದಿದ್ದಾಗ ಈ ಘಟನೆ ನಡೆದಿದೆ. ಮೃತ ಯೋಧನನ್ನು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ರಾಮಗಢದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯ ಬಿಎಸ್‌ಎಫ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ […]

ವಾಷಿಂಗ್ಟನ್: ಭಾರತ ಕಂಪನಿ ಸೇರಿದಂತೆ ಏಳು ಖಾಸಗಿ ಪತ್ತೆದಾರಿ(ಸ್ಪೈ) ಸಂಸ್ಥೆಗಳನ್ನು ತನ್ನ ಪ್ಲಾಟ್‌ಫಾರಂನಿಂದ ಫೇಸ್‌ಬುಕ್ ಬ್ಯಾನ್ ಮಾಡಿದೆ. ಹ್ಯಾಕಿಂಗ್ ಹಾಗೂ ಇತರ ಸೈಬರ್ ಅಪರಾಧಗಳನ್ನು ಗುರುತಿಸಿದ ಫೇಸ್‌ಬುಕ್ ಅವುಗಳ ಹೆಸರನ್ನು ಬಹಿರಂಗ ಪಡಿಸಿದೆ. ಇದರಲ್ಲಿ ಒಂದು ಭಾರತೀಯ ಸಂಸ್ಥೆಯೂ ಸೇರಿರುವುದು ಆಘಾತಕಾರಿ ಸಂಗತಿಯಾಗಿದೆ. ಭಾರತೀಯ ಕಂಪನಿ ಬೆಲ್ಟ್ರೋಕ್ಸ್ ಸೇರಿದಂತೆ ಬ್ಲ್ಯಾಕ್ ಕ್ಯೂಬ್, ಬ್ಲೂಹಾಕ್ ಸಿಐ, ಸೈಟ್ರೋಕ್ಸ್ ಹೀಗೆ ಒಟ್ಟು ಏಳು ಸಂಸ್ಥೆಗಳ ಹೆಸರುಗಳನ್ನು ಬಹಿರಂಗ ಪಡಿಸಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ […]

ಪಿರಿಯಾಪಟ್ಟಣ:20 ಡಿಸೆಂಬರ್ 2021 ನಂದಿನಿ ಪಿರಿಯಾಪಟ್ಟಣ ತಾಲೂಕಿನ ಭೋಗನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ ಹಾಗೂ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಾದೇಶ್ವರ ಜ್ಞಾನವಿಕಾಸ ಕೇಂದ್ರದ ಉದ್ಘಾಟನೆ ಮಾಡಿದ ಯೋಜನಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮ ಮಾವತಿ ಅಮ್ಮನವರ ಕನಸಿನ ಕೂಸು, ಇದನ್ನು ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ನಡೆಸಿ ಕೊಡುವುದಾಗಿ ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕುಟುಂಬ ನಿರ್ವಹಣೆಗೆ ಅತಿ ಕಮ್ಮಿ […]

ಚೆನ್ನೈ: ಐಫೋನ್ ಕಾರ್ಖಾನೆಯಲ್ಲಿ ಕಲುಷಿತ ಆಹಾರವನ್ನು ಸೇವಿಸಿ 150 ಮಂದಿ ಅಸ್ವಸ್ಥರಾಗಿದ್ದಾರೆ. ಆ್ಯಪಲ್ ಕಂಪನಿಯ ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿಯಲ್ಲಿ ನೀಡಿದ ಕಲುಷಿತ ಆಹಾರ ಸೇವೆಯಿಂದಾಗಿ ಅಸ್ವಸ್ಥಗೊಂಡು, 150ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. 256 ನ್ನು ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗಿದ್ದು, 159 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 155 ಮಂದಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ವಿಚಾರವಾಗಿ ಕೋಪಗೊಂಡ ಸಿಬ್ಬಂದಿ ಬೆಂಗಳೂರು-ಚೆನ್ನೈ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅಸ್ವಸ್ಥರನ್ನು […]

Wordpress Social Share Plugin powered by Ultimatelysocial