ರಂಗೇರುತ್ತಿರುವ ’ಗೌಡ’ರ ಕುಟುಂಬ ರಾಜಕಾರಣ


ಹಾಸನ- ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಪಕ್ಷಾಂತರಿಗಳ ವಿಚಾರ ಒಂದಡೆಯಾದರೆ ಇದೀಗ ರಾಜ್ಯದ ‘ಗೌಡ’ರ ಕುಟುಂಬ ‘ಟಿಕೆಟ್’ ವಿಚಾರದಲ್ಲಿ ಹಾದಿರಂಪ ಬೀದಿರಂಪ ಮಾಡಿಕೊಂಡಿರುವುದು ಇನ್ನೊಂದೆಡೆ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ಜಿಲ್ಲೆಗಳ ಪೈಕಿ ಮೊದಲಿನಿಂದಲೂ ಹಾಸನ ಮತ್ತು ಮಂಡ್ಯ ಜಿಲ್ಲೆಗಳು ‘ಜಾತ್ಯಾತೀತ’ ಪಕ್ಷದ ಭದ್ರಕೋಟೆಯಾಗಿದೆ. ಈ ಎರಡು ಜಿಲ್ಲೆಗಳ ಮೇಲೆ ಜೆಡಿಎಸ್ ಪರಮೋಚ್ಚ ನಾಯಕರೂ ಆದ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡರ ಪಾರುಪತ್ಯ ಮೊದಲಿನಿಂದಲೂ ಇದೆ. ಹಾಗೆಯೇ ಅದನ್ನು ರುಜುವಾತು ಮಾಡುತ್ತಾ ಬಂದಿದ್ದಾರೆ. ದೇವೇಗೌಡರ ಕುಟುಂಬದ ಸದಸ್ಯರುಗಳ ಪೈಕಿ ಈಗಾಗಲೇ ದೇವೇಗೌಡರಾದಿಯಾಗಿ ಸೂರಜ್ ರೇವಣ್ಣ ವರೆವಿಗೂ ಒಟ್ಟು ಆರು ಮಂದಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಒಬ್ಬರು ರಾಜ್ಯಸಭೆ (ಎಚ್.ಡಿ. ದೇವೇಗೌಡರು), ಒಬ್ಬರು ಲೋಕಸಭೆ (ಪ್ರಜ್ವಲ್ ರೇವಣ್ಣ), ಮೂವರು ವಿಧಾನಸಭೆ (ಎಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ ಮತ್ತು ಅನಿತಾ ಕುಮಾರಸ್ವಾಮಿ) ಹಾಗೂ ಒಬ್ಬರು ವಿಧಾನ ಪರಿಷತ್ (ಸೂರಜ್ ರೇವಣ್ಣ). ಈ ಮಧ್ಯೆ ಗೌಡರ ಕುಟುಂಬದ ಮತ್ತೊಂದು ಕುಡಿ ನಿಖಿಲ್ ಕುಮಾರಸ್ವಾಮಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಮಂಡ್ಯ ಕ್ಷೇತ್ರದಿಂದ ಅಖಾಡಕ್ಕೆ ಇಳಿದು ಪರಾಭವಗೊಂಡಿದ್ದರೂ, ಸಕ್ರಿಯ ರಾಜಕಾರಣದಿಂದ ದೂರ ಸರಿದಿಲ್ಲ. ಮುಂಬರಲಿರುವ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.ಇಡೀ ಕುಟುಂಬ ಸಕ್ರಿಯ ರಾಜಕಾರಣದಲ್ಲಿರುವ ನಡುವೆಯೇ ’ಗೌಡ’ರ ಕುಟುಂಬದ ಸೊಸೆ ಭವಾನಿ ರೇವಣ್ಣ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿರುವುದು ಇದೀಗ ರಾಜ್ಯದ ದೊಡ್ಡ ಸುದ್ದಿಯಾಗಿದೆ. ಹಾಸನ ಕ್ಷೇತ್ರವನ್ನು ಇದೀಗ ಬಿಜೆಪಿಯ ಪ್ರೀತಂಗೌಡ ಪ್ರತಿನಿಧಿಸುತ್ತಿದ್ದಾರೆ. ಚುನಾವಣೆಯಲ್ಲಿ ತಮಗೇ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಭವಾನಿ ರೇವಣ್ಣ ಇಟ್ಟ ಟಿಕೆಟ್ ಬೇಡಿಕೆ ಇದೀಗ ಕುಟುಂಬ ರಾಜಕಾರಣದಲ್ಲಿ ಹೊಸ ಬಿಕ್ಕಟ್ಟನ್ನು ತಂದೊಡ್ಡಿದೆ. ಇದನ್ನು ಬಗೆಹರಿಸಲು ‘ದೊಡ್ಡ ಗೌಡ’ರು ಮುನ್ನೆಲೆಗೆ ಬರಬೇಕಾಗಿದೆ.ಹಾಸನದಿಂದ ಸ್ಪರ್ಧಿಸುವ ಕುರಿತ ಭವಾನಿ ರೇವಣ್ಣರವರ ಟಿಕೆಟ್ ಆಸೆಗೆ ತಣ್ಣೀರು ಎರಚಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಡಿರುವ ಮಾತುಗಳು ಇದೀಗ ಮಾಜಿ ಸಚಿವ ಹೆಚ್.ಡಿ. ರೇವಣ್ಣರ ಸುಪುತ್ರರನ್ನು ಕೆರಳಿಸಿದೆ. ತಮ್ಮ ತಾಯಿಗೆ ಟಿಕೆಟ್ ನಿರಾಕರಿಸುವ ಅಧಿಕಾರ ನಮ್ಮ ಚಿಕ್ಕಪ್ಪ ಹೆಚ್.ಡಿ. ಕುಮಾರಸ್ವಾಮಿ ಅವರಿಗಿಲ್ಲ. ಹಾಸನ ಜಿಲ್ಲಾ ರಾಜಕಾರಣ ವಿಚಾರದಲ್ಲಿನ ಪರಮಾಧಿಕಾರ ಏನೇ ಇದ್ದರೂ ಅದು ‘ನಮ್ಮ ತಾತ ಮತ್ತು ತಂದೆ’ಯವರದೆಂದು ಡಾ. ಸೂರಜ್ ರೇವಣ್ಣ ಹೇಳುವ ಮೂಲಕ ಚಿಕ್ಕಪ್ಪನಿಗೆ ದೊಡ್ಡ ಟಾಂಗ್ ನೀಡಿದ್ದಾರೆ’ ಹಾಸನದಲ್ಲಿ ಮಾತನಾಡಿದ ಸೂರಜ್ ರೇವಣ್ಣ ತಾಯಿ ಭಾವನಿ ರೇವಣ್ಣ ನವರ ಪರವಾಗಿ ಬ್ಯಾಟೀಂಗ್ ಬೀಸಿದ್ದಾರೆ. ಹಾಸನದಲ್ಲಿ ಬೇರೆಯವರನ್ನ ಅಭ್ಯರ್ಥಿ ಮಾಡುವುದನ್ನು ಬಿಡಿ. ಭವಾನಿ ರೇವಣ್ಣ ಅಭ್ಯರ್ಥಿಯಾದ್ರೆ ಗೆಲುವು ಖಚಿತ. ಬರೆದು ಕೊಡುತ್ತೇನೆ ಎಂದು ಹಾಸನ ವಿಚಾರದಲ್ಲಿ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಕಳೆದ ೧೫ ವರ್ಷಗಳಿಂದ ರೇವಣ್ಣ ಹಾಸನ ಜಿಲ್ಲೆಯನ್ನು ನಿಭಾಯಿಸುತ್ತಿದ್ದಾರೆ. ೨೦೧೮ರಲ್ಲಿ ಹಾಸನ ಕ್ಷೇತ್ರವನ್ನ ಜೆಡಿಎಸ್ ಕಳೆದುಕೊಂಡಿದೆ. 2023ರಲ್ಲಿ ಹಾಸನದಲ್ಲಿ ಜೆಡಿಎಸ್ ಮರುಜನ್ಮ ಪಡೆಯಬೇಕು. ಹಾಸನದಲ್ಲಿ ೧೫ ವರ್ಷದಿಂದ ಸತತವಾಗಿ ಗೆಲ್ಲಿಸಿದ್ದು ರೇವಣ್ಣ. ರೇವಣ್ಣರವರ ಸ್ವಂತ ಪ್ರಯತ್ನದಿಂದ ಹಾಸನದಲ್ಲಿ 7 ಸೀಟ್ ಗೆದ್ದಿದ್ದೇವೆ. ಹೀಗಾಗಿ ಹಾಸನ ರಾಜಕಾರಣವನ್ನ ಹೆಚ್.ಡಿ ರೇವಣ್ಣ ಅವರು ನೋಡಿಕೊಳ್ಳುತ್ತಾರೆ. ಹಾಸನವನ್ನ ರೇವಣ್ಣ ಅವರು ಅರಿತಷ್ಟು ಯಾರು ಅರಿತಿಲ್ಲ. ಆರರಿಂದ ಏಳು ಶಾಸಕರನ್ನ ಆಯ್ಕೆ ಮಾಡಿ ಕಳಿಸಿದ್ದಾರೆ. ರೇವಣ್ಣ ಬಿಟ್ಟರೇ ನಿರ್ಧರಿಸುವ ಅಧಿಕಾರ ಇನ್ಯಾರಿಗೂ ಇಲ್ಲ ಎಂದಿದ್ದಾರೆ. ಮೊದಲಿನಿಂದಲೂ ನಮ್ಮ ತಾತ (ಎಚ್..ಡಿ.ದೇವೇಗೌಡ) ಈ ಜಿಲ್ಲೆಯ ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು.
ಭವಾನಿ ಟಿಕೆಟ್ ಪರವಾಗಿ ಪ್ರತಿಭಟನೆ
ಈ ಮಧ್ಯೆ ಹಾಸನದಿಂದ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮುಂಬರುವ ಕರ್ನಾಟಕ ಚುನಾವಣೆಗೆ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಮತ್ತು ಅದರ ಕುಟುಂಬದಲ್ಲಿ ಗೊಂದಲವಿದೆ ಎನ್ನಲಾಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಟಿಕೆಟ್ ವಿಚಾರದಲ್ಲಿ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿರುವುದು ಈಗ ಭವಾನಿ ಅವರ ಬೆಂಬಲಿಗರು ಕೆರಳಿದ್ದು, ತಮ್ಮ ನಾಯಕಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕಿ ಹಾಗೂ ದೇವೇಗೌಡರ ಸೊಸೆ ಭವಾನಿ ರೇವಣ್ಣ ಮಣಿಯದೇ ಇರುವುದರಿಂದ ಈ ಸ್ಥಾನ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

Please follow and like us:

Leave a Reply

Your email address will not be published.

Next Post

Charges and you will charge off financing against securities

Sun Jan 29 , 2023
Charges and you will charge off financing against securities Foreclosure charge is actually zero. However, if you close the borrowed funds inside 7 days out of reservation, you pay minimal 7 days’ attention. Costs and you can fees from car or truck money One decelerate inside payment out-of monthly instalment/ […]
Wordpress Social Share Plugin powered by Ultimatelysocial