ಶ್ರೀ ಗಂಗಾಂಬಿಕೆ ಏಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ತಾಜ್ ಮಹಲ್ 2” ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಅದಕ್ಕೂ ಮುನ್ನ ಡಿಸೆಂಬರ್ 30 ರಂದು ಚಿತ್ರರಂಗದ ಹಲವು ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ.
ನಿರ್ದೇಶನ ಮಾಡಿರುವ ದೇವರಾಜ್ ಕುಮಾರ್ ನಾಯಕನಾಗೂ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ದೇವರಾಜ ಕುಮಾರ್ ಅವರು ಡೇಂಜರ್ ಜೋನ್ ಮತ್ತು ನಿಶಬ್ದ ೨ ಹಾಗೂ ಅನುಷ್ಕಾ ನಿರ್ದೇಶನ ಮಾಡಿದ್ದಾರೆ .
ದೇವರಾಜ್ ಕುಮಾರ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ.
ಮನ್ವರ್ಷಿ ನವಲಗುಂದ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿದ್ದಾರೆ. ವಿಕ್ರಮ್ ಸೆಲ್ವ ಸಂಗೀತ ನಿರ್ದೇಶನ, ಚಂದ್ರು ಬಂಡೆ ಸಾಹಸ ನಿರ್ದೇಶನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ವಿಜಯ್ ಅವರ ಸಂಕಲನವಿದೆ.
ನೈಜ ಪ್ರೇಮಕಥೆಯನ್ನು ಆಧರಿಸಿದ ಈ ಚಿತ್ರದ ತಾರಾಬಳಗದಲ್ಲಿ ದೇವರಾಜ್ ಕುಮಾರ್, ಸಮೃದ್ಧಿ, ಜಿಮ್ ರವಿ, ಶೋಭ್ ರಾಜ್, ಶಿವರಾಂ, ತಬಲಾ ನಾಣಿ, ಕಡ್ಡಿಪುಡಿ ಚಂದ್ರು, ಕಾಕ್ರೋಜ್ ಸುಧೀ ಮುಂತಾದವರಿದ್ದಾರೆ.
Hi, this is a comment.
To get started with moderating, editing, and deleting comments, please visit the Comments screen in the dashboard.
Commenter avatars come from Gravatar.