ಬೆಂಗಳೂರು- ಕರ್ನಾಟಕದ ವಿವಿಧ ರೈಲು ಯೋಜನೆಗಳಿಗೆ ಒಂದು ವರ್ಷದಲ್ಲಿ ದಾಖಲೆ ಮೊತ್ತದ ಅನುದಾನ ನೀಡಲಾಗಿದೆ. ಲೋಕಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಾಹಿತಿ ನೀಡಿದ್ದಾರೆ. 2022-23ನೇ ಸಾಲಿನಲ್ಲಿ ರಾಜ್ಯದ ರೈಲು ಯೋಜನೆಗಳಿಗೆ 6091 ಕೋಟಿ ರೂ. ಹಣ ನೀಡಲಾಗಿದೆ. 2009-14ಕ್ಕೆ ಹೋಲಿಕೆ ಮಾಡಿದರೆ ಇದು ೬ ಪಟ್ಟು ಹೆಚ್ಚಾಗಿದೆ ಎಂದು ಸಚಿವರು ಸಂಸದರ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಈ ಉತ್ತರದ ಮೂಲಕ ರಾಜ್ಯದ ರೈಲು ಯೋಜನೆಗಳ ವಿವರಗಳನ್ನು ಸಚಿವರು ಒದಗಿಸಿದ್ದಾರೆ. ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಸಚಿವರು ಕರ್ನಾಟಕದ ಸರ್ಕಾರದ ಶೇ 50ರಷ್ಟು ಅನುದಾನದ ನೆರವಿನಿಂದ ರಾಜ್ಯದಲ್ಲಿ 14 ರೈಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ವೆಚ್ಚ ಹಂಚಿಕೆಯು 1674 ಕಿ. ಮೀ. ಆಗಿದೆ, ಕಾಮಗಾರಿಗಳಿಗೆ 18,811 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಬೀದರ್ ಮಾರ್ಗದಲ್ಲಿ 3 ಹೊಸ ರೈಲು, ವೇಳಾಪಟ್ಟಿ ಹಾವೇರಿಯ ಸಂಸದ ಶಿವಕುಮಾರ್ ಉದಾಸಿ ಮತ್ತು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರ ನೀಡಿದ ಕೇಂದ್ರ ಸಚಿವರು ರಾಜ್ಯದ ರೈಲು ಯೋಜನೆಗಳು, ವೆಚ್ಚ, ಹೊಸ ಯೋಜನೆ, ದ್ವಿಪಥ ಮುಂತಾದ ಮಾಹಿತಿಗಳನ್ನು ನೀಡಿದ್ದಾರೆ.
ಹೊಸ ರೈಲಿನ ಪ್ರಸ್ತಾವನೆ ಸದ್ಯಕ್ಕಿಲ್ಲ
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಉತ್ತರ ನೀಡುವಾಗ ಕಲಬುರಗಿ-ಬೆಂಗಳೂರು ಹೊಸ ರೈಲಿನ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಮಾಹಿತಿ ನೀಡಿದರು. ಸಂಸದ ಡಾ. ಉಮೇಶ್ ಜಾಧವ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, “ಬೆಂಗಳೂರು-ಕಲಬುರಗಿ ನಡುವೆ ಹೊಸ ರೈಲಿಗಾಗಿ ಪ್ರಸ್ತಾವನೆ ಬಂದಿದೆ. ಆದರೆ ಸದ್ಯಕ್ಕೆ ಹೊಸ ರೈಲು ಸಂಚಾರ ಆರಂಭಿಸುವುದಿಲ್ಲ. ಪ್ರಯಾಣಿಕರ ದಟ್ಟಣೆ, ಸಂಪನ್ಮೂಲ ಮುಂತಾದ ಅಂಶಗಳನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ” ಎಂದರು.
ಕರ್ನಾಟಕಕ್ಕೆ ನೀಡುತ್ತಿರುವ ಅನುದಾನಗಳು
ರೈಲ್ವೆ ಸಚಿವರು ಕರ್ನಾಟಕದ ವಿವಿಧ ಯೋಜನೆಗಳಿಗೆ ವರ್ಷದಿಂದ ವರ್ಷಕ್ಕೆ ನೀಡುತ್ತಿರುವ ಅನುದಾನ ಹೆಚ್ಚಾಗುತ್ತಿದೆ ಎಂದು ಲೋಕಸಭೆಗೆ ತಿಳಿಸಿದ್ದಾರೆ. ರಾಜ್ಯಕ್ಕೆ 2014-19ರ ತನಕ 2702 ಕೋಟಿ, 2019-20ರಲ್ಲಿ 3,386 ಕೋಟಿ, 2021-22ರಲ್ಲಿ 4,220 ಕೋಟಿ ನೀಡಲಾಗಿದೆ. 2022-23ನೇ ಸಾಲಿನಲ್ಲಿ 6,091 ಕೋಟಿ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 2022-23ನೇ ಸಾಲಿನಲ್ಲಿ ನೀಡಲಾದ ಅನುದಾನ ಕರ್ನಾಟಕಕ್ಕೆ ವರ್ಷವೊಂದಕ್ಕೆ ನೀಡಿರುವ ದಾಖಲೆಯ ಅನುದಾನವಾಗಿದೆ.
ಕರ್ನಾಟಕದ ಯೋಜನೆಗಳ ವಿವರಗಳು
ಸಚಿವರ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ವಿವಿಧ ಹಂತದಲ್ಲಿರುವ ರೈಲು ಯೋಜನೆಗಳು 32. ಇವುಗಳು ಕಿ. ಮೀ. ಲೆಕ್ಕದಲ್ಲಿ 4,330 ಕಿ. ಮೀ ಆಗಿದೆ. ಇವುಗಳಲ್ಲಿ 21 ಹೊಸ ಮಾರ್ಗಗಳು. 11 ದ್ವಿಪಥ ಕಾಮಗಾರಿಗಳು, ಒಟ್ಟು 1305 ಕಿ. ಮೀ. ಕಾಮಗಾರಿ ಪೂರ್ಣಗೊಂಡಿವೆ. 21 ಹೊಸ ಯೋಜನೆಗಳ ಉದ್ದ 2,533 ಕಿ. ಮೀ., ಈ ಯೋಜನೆಗಳಿಗಾಗಿ 32,900 ಕೋಟಿ ಮೀಸಲಿಡಲಾಗಿದೆ. 11 ದ್ವಿಪಥ ಕಾಮಗಾರಿಗಳ ಉದ್ದ 1747 ಕಿ. ಮೀ. ಇದಕ್ಕಾಗಿ 16,187 ಕೋಟಿ ವೆಚ್ಚ. 986 ಕಿ. ಮೀ. ಕಾಮಗಾರಿ ಪೂರ್ಣಗೊಳಿಸಲಾಗಿದೆ. 11,096 ಕೋಟಿ ಇದುವರೆಗೂ ವೆಚ್ಚವಾಗಿದೆ. ಭೂ ಸ್ವಾಧೀನನದ ಪ್ರಸ್ತಾಪ ಮಂಡ್ಯದ ಸಂಸದೆ ಸುಮಲತಾ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು ಹೆಜ್ಜಾಲ-ಚಾಮರಾಜನಗರ ನಡುವಿನ 135ಕಿ. ಮೀ. ನಡುವಿನ ರೈಲು ಮಾರ್ಗಕ್ಕೆ 1753 ಖಾಸಗಿ ಭೂಮಿ ಸ್ವಾಧೀನಕ್ಕೆ ಸ್ಥಳೀಯ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಗೆ ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ನೀಡಿ, ಶೇ ೫೦ರಷ್ಟು ವೆಚ್ಚ ಭರಿಸಲಿದೆ. ಈ ಮಾರ್ಗ ಕನಕಪುರ, ಮಳವಳ್ಳಿ, ಕೊಳ್ಳೆಗಾಲ, ಯಳಂದೂರು ಮೂಲಕ ಸಾಗಲಿದೆ. ಬೆಂಗಳೂರು-ಸತ್ಯಮಂಗಲ ನಡುವೆ 260 ಕಿ. ಮೀ. ಮಾರ್ಗ ನಿರ್ಮಾಣಕ್ಕೆ ಇಲಾಖೆ ಸಿದ್ಧವಿತ್ತು. ಆದರೆ ಸತ್ಯಮಂಗಲ ಕಾಡಿನೊಳಗೆ ಮಾರ್ಗ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ, ಕೇಂದ್ರ ಉನ್ನತಾಧಿಕಾರಿ ಸಮಿತಿ ಒಪ್ಪಿಗೆ ನೀಡಲಿಲ್ಲ ಎಂದು ಸಚಿವರು ವಿವರಣೆ ನೀಡಿದ್ದಾರೆ. ಆದ್ದರಿಂದ ಹೆಜ್ಜಾಲ-ಚಾಮರಾಜನಗರ ಮಾರ್ಗಕ್ಕೆ ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.